Friday, 29 March 2013

ನಮ್ಮ ಮಾನವತ್ವ ಏಷ್ಟು ..!?

ನಮ್ಮ  ಮಾನವತ್ವ ಏಷ್ಟು ..!?

ನಮ್ಮ ದಿನ ನಿತ್ಯದ ಜೀವನದಲ್ಲಿ ಮಾನವತ್ವ ಎಷ್ಟಿದೆ ಅಂತ ಯಾವಾಗಲಾದರೂ ಯೋಚಿಸಿದ್ದೀರಾ .!? 
ಅಸಲು ಮಾನವತ್ವ ಅಂದರೆ ಅದು ಕೇವಲ ಮಾನವನ ಕ್ಷೇಮಾಭಿವೃದ್ಧಿಗೆ ಸೀಮಿತವಾದದ್ದ !? 
ಅಥವಾ ಅದು ಬರೀ ನಮ್ಮ ವ್ಯಕ್ತಿತ್ವವನ್ನು ಬೇರೆಯವರ ಮುಂದೆ ತೋರಿಕೆ ಪಡಿಸಲು ಮಾತನಾಡುವ ಪದವೇ !?
 ಇಲ್ಲ ಅದೊಂದು ಕೆಲವೇ ವ್ಯಕ್ತಿಗಳ ಆಸ್ತಿತ್ವದ  ಆಸ್ತಿಯೇ !? 
ಹೀಗೆ ನಮ್ಮ ಮನಸ್ಸಿನ  ಮಾನವತ್ವದ ಬಗ್ಗೆ ತಿಳಿಯುತ್ತಾ ಹೋದರೆ ಬಗೆ ಬಗೆಯ ವಿಷಯಗಳು ನಮ್ಮ ಮನದ ಕನ್ನಡಿಯಲ್ಲಿ ಪ್ರತಿಬಿಂಬಿಸುತ್ತವೆ. 

ನಿಮಗೆ ಗೊತ್ತೇ ಪ್ರತಿಯೊಂದು 'ಮಗುವು' ಈ ಲೋಕದ ಕರ್ಮಗಳನ್ನು ಕಲಿಯುವವರೆಗೂ ಅದು'ಮಾನವತ್ವ' ತುಂಬಿರುವ ಕಲ್ಪವೃಕ್ಷವೇ ಆಗಿದೆ, 

೧. ನೀವು ಯಾವುದೇ ಮಗುವಿನ ಹತ್ತಿರಕ್ಕೆ ಎಷ್ಟೇ ದುಃಖ, ಕೋಪ, ದ್ವೇಷ , ಅಸೂಹೆ, ಕಲ್ಮಶ ಮನಸ್ಸು, ದ್ರೋಹ, ಏನೇ ಆದರು ಆ ಮಗುವು ನಿಮ್ಮನ್ನು ತನ್ನ ಮುಗ್ಧ ನಗುವಿನ ಮೂಲಕ ನಿಮ್ಮಲ್ಲೊಂದು ಅರೆಕ್ಷಣ ಮಾನವತ್ವದ ಅರಿವನ್ನು ಹೆಚ್ಚರಿಸುತ್ತದೆ, ಮಗುವಿನ ಮನಸ್ಸಿಗೆ ಎಲ್ಲವು ಒಂದೇ. 

೨. ಯಾವುದೇ ಮಗುವು ಮೊದಲು ಎಲ್ಲವನ್ನು ಪ್ರೀತಿಸುವುದನ್ನೇ ಕಲಿಯುತ್ತದೆ, ಆದರೆ ನಂತರ ಈ ಸಮಾಜವೇ ಮಾನವತ್ವಕ್ಕೆ ವಿರುದ್ಧವಾದದ್ದೆಲ್ಲವನ್ನು ಕಲಿಸುತ್ತದೆ. 

೩. ಪ್ರತಿಯೊಬ್ಬ ಮಾನವನಲ್ಲೂ ಸುಪ್ತ ಮನಸ್ಸಿನಲ್ಲಿ ಮಗುವಿನಲ್ಲಿರುವಂತಹ 'ಮಾನವತ್ವ' ಅಡಗಿರುತ್ತದೆ, ಆದರೆ ಈ ಜಗದ ನಿಯಮಗಳಿಗೆ, ಆಸೆಗಳಿಗೆ, ಸ್ವಾರ್ಥಗಳಿಗೆ ಅಡಿಯಾಳುದವನು 'ಮಾನವತ್ವ'ವನ್ನು ಆಚರಿಸಲಾರ. 

ನಮ್ಮ ಪ್ರೆಶ್ನೆಗಳು , ನಮ್ಮ ಉತ್ತರಗಳು ಮತ್ತು ನಮ್ಮ  ಕಳ್ಳ ಮನಸ್ಸುಗಳು :

೧. ನಾವು ರಸ್ತೆಯಲ್ಲಿ, ವಾಹನಗಳಲ್ಲಿ , ಮತ್ತು ಸಾರ್ವಜನಿಕವಾಗಿ ಪ್ರತಿನಿತ್ಯ ಓಡಾಡುತ್ತಿರುತ್ತಿರಿ ರಸ್ತೆಗಳಲ್ಲಿ ನಮ್ಮ ವಾಹನಗಳಿಗೆ ಸಿಕ್ಕಿ ನಾಯಿ, ಕೋತಿ , ಪಶು ಪ್ರಾಣಿಗಳು ಜೀವತೆತ್ತು ರಸ್ತೆಯಲ್ಲೇ ಟೈರ್ ಗಳ ರುಬ್ಬುವಿಕೆಯ ರಭಸಕ್ಕೆ ದೇಹ ಚಿನ್ದಿಯಾಗುತ್ತಿರುತ್ತವೆ ಆಗ ನಮ್ಮ ಮನಸ್ಸಿನಲ್ಲಿ ಮೂಡುವ ಭಾವನೆಗಳೇನು ..!? ಲೆಕ್ಕಹಾಕಿ ..... 

ಅ) ಅಯ್ಯೋ ಪಾಪ ಸತ್ತು ಹೋಗಿವೆ. !

ಆ) ಇವು ರಸ್ತೆಗೇಕೆ ಬರಬೇಕು. ?

ಇ) ಚುತ್  ಚುತ್ ದೇಹ ಚಿಂದಿ ಆಗಿ ಬಿಟ್ಟಿದೆ !

ಈ) ಅಯ್ಯೋ ಯಾರೋ ಈಗ ತಾನೇ ಓಡ್ಕೊಂಡು  ಹೋಗ್  ಬಿಟ್ತಾವ್ನೆ, ಹೋಗ್ಲಿ ಬಿಡು ಏನ್ ಮಾಡಾಕುಗುತ್ತೆ ? 

ಇ) ಅಯ್ಯೋ ಪಾಪ ಯಾರಾದರು ಅವುಗಳನ್ನು ಎತ್ತಿ ಪಕ್ಕಕ್ಕಾದರು ಹಾಕಲಿಲ್ಲವೇ, ನಾವು ಹಾಕೋಣ ಅಂದ್ರೆ ಯಾವುದೋ ಅರ್ಜೆಂಟ್ ಕೆಲಸದ್ಮೇಲೆ ಹೋಗ್ತಾ ಇದ್ದೀವಿ  ಹೋಗ್ಲಿ ಬಿಡು ಏನ್ ಮಾಡಾಕುಗುತ್ತೆ . !

ಈ ) ಏನ್ಮಾಡೋದು ನಾನು ಹೋಗಿ ಸೈಡ್ ಗೆ ಎತ್ತಿ ಹಾಕಿದ್ರೆ ಬೇರೆಯವರ ಕಣ್ಣಿಗೆ ವಿಚಿತ್ರವಾಗಿ ಕಾನ್ತಿನೇನೋ, ನಮಗ್ಯಾಕೆ ಸುಮ್ನೆ ಹೊರ್ಟೊಗೊಣ ಇತ್ಯ

ಇದರಲ್ಲಿ ವಾಹನವನ್ನ ನಿಲ್ಲಿಸಿ ಅಥವಾ ಅಲ್ಲಿ ನಿಂತು ಈ ಮೇಲ್ಕಂಡ ಎಲ್ಲಾ ಸ್ಥಿತಿಗಳನ್ನು ಮೀಟಿ ,ಆ ರಸ್ತೆಯಲ್ಲಿ ಸತ್ತಿರುವ ದೇಹವನ್ನು ರಸ್ತೆಬದಿಗೆ  ತಂದು ಅದನ್ನು ಮಣ್ಣಲ್ಲಿ ಹೂತಿಡುವ ಕಾರ್ಯಕ್ಕೆ ಒಪ್ಪುವ ಮತ್ತು ಆ ಕಾರ್ಯ ಮಾಡುವ 
ಮನಸ್ಸುಗಳೆಷ್ಟು !!?

ಇದು ಇಲ್ಲಿಗೆ ನಿಂತಿಲ್ಲ ಸಮಯದ ಅಭಾವದಿಂದ ಈ ದಿನ ಇಲ್ಲಿಗೆ ನಿಲ್ಲಿಸುತ್ತಿದ್ದೇನೆ ,  ಮತ್ತೆ ಮುಂದುವರೆಸುತ್ತೇನೆ ಕ್ಷಮಿಸಿ ಇನ್ನು ನಾವು ಪ್ರೆಶ್ನಿಸಿಕೊಲ್ಲಾಬಕೆಅದ ವಿಚಾರಗಳು, ವಿಷಯಗಳು ಹೆಚ್ಚಾಗಿವೆ .. 

 ನನ್ನ ಈ  ಬರಹಗಳಿಂದ ಯಾರಿಗಾದರು ನೋವುಂಟಾಗಿದ್ದರೆ ತಿಳಿಸಿ ... ಮತ್ತು ಕ್ಷಮಿಸಿ ... 

                                                                                        - ಶೂಜ್ಞ 3 comments:

  1. ತಮ್ಮ ಕಾವ್ಯನಾಮ - ಶೂಜ್ಞ ಮನಸೆಳೆಯಿತು. ಮಾನವೀಯತೆಯ ಪಾಠ ಮಾಡುವ ಮತ್ತು ಮಾನವೀಯತೆ ಕಲಿಸುವ ಒಳ್ಳೆಯ ಸಂಗ್ರಹ ಯೋಗ್ಯ ಬರಹವಿದು.

    ReplyDelete
  2. ಈ ನಿಮ್ಮ ಪ್ರೋತ್ಸಾಹಕ್ಕೆ ನಾನು ಅಭಾರಿಯಾಗಿದ್ದೇನೆ ಸರ್, ನಿಮ್ಮ ನಮ್ಮ ವಿಚಾರ ವಿನಿಮಯ ಹೀಗೆ ನಡೆಯಲಿ...

    ReplyDelete
  3. ಈ ನಿಮ್ಮ ಪ್ರೋತ್ಸಾಹಕ್ಕೆ ನಾನು ಅಭಾರಿಯಾಗಿದ್ದೇನೆ ಸರ್, ನಿಮ್ಮ ನಮ್ಮ ವಿಚಾರ ವಿನಿಮಯ ಹೀಗೆ ನಡೆಯಲಿ...

    ReplyDelete