Sunday 20 January 2013

ಇದಕ್ಕೆಲ್ಲಾ ಯಾರು ಕಾರಣ ...... !!!???

          ಜೀವಕೊಶಗಳಿಂದ ಕೂಡಿದ ಈ ಮೂರ್ತ ರೂಪದ ಜೀವಿಯಲ್ಲಿ  ಅಮೂರ್ತ ರೂಪದ ಭಾವಕೋಶಗಳು ಅನಂತಸಾಗರ, ಇರುವುದೊಂದೇ ಜೀವಾಣದ ಜೀವನವಾದರೂ ಆ ಜೀವನದಲ್ಲಿ ಜಯಿಸಲು ಹೋಗಿ ಜಾರುವ ಜಾಗಗಳೆಷ್ಟೋ, ಜೀವನವನ್ನೇ ಅರ್ಥ ಮಾಡಿಕೊಳ್ಳದೆ ಮಾಡುವ ಅನರ್ಥಗಳೆಷ್ಟೋ!, 
             ಈ ಜಗದಲ್ಲಿರುವ ಎಲ್ಲಾ ಆಗುಹೋಗುಗಳಿಗೂ ಈ ಜೀವಿಯದೆ 'ತುಲಾಭಾರ'!? ಅದರಲ್ಲಿ ಮಾನವನ ಅಷ್ಟೂ ಜೀವನ ಜಂಜಡಗಳಿವೆ ಅವುಗಳನ್ನು ನಮ್ಮ ಪುರಾಣಗಳು, ರಾಮಾಯಾಣ, ಮಹಾಭಾರತ, ಮತ್ತು  ಜಗದ ಇತರೆ ಆನೇಕ  ಗ್ರಂಥಗಳಲ್ಲಿ ಅರ್ಥಪೂರ್ಣವಾಗಿ ತಿಳಿಸಿವೆ. ಮೊಹಮ್ಮದ್, ಜೀಸಸ್, ಬುದ್ಧ, ಕನ್ಫ಼ುಶಿಯಸ್, ಬಾಬಾ, ಬಸವಣ್ಣ,  ಸಾದು ಸಂತರು, ಧಾರ್ಶನಿಕಾದಿತ್ಯಾದಿಯಾಗಿ ಆದಿಯಿಂದ ಅಂತ್ಯದ ಪಯಣದವರೆಗೂ 'ಮಾನವ ಜೀವನ'ದ ಬಗ್ಗೆ 'ಮನಸ್ಸಿ'ನ ಬಗ್ಗೆ 'ಆತ್ಮದ ಬಗ್ಗೆ, ಮಾನವ ಜೀವಿಯ ಶ್ರೇಷ್ಟತೆಯ ಬಗ್ಗೆ ಅರಿವು ಮೂಡಿಸುತ್ತಾ ಬಂದರೂ ಸಹ ಈ ಮಾನವ ಮಾನಸಿಕವಾಗಿ ಕ್ರೂರಿಯಾಗುತಿದ್ದಾನೆ ಹಾಗೆಯೇ ಅವನು ವಿಜ್ಞಾನದ ಹಾದಿಯಲ್ಲಿ  ಶ್ರೇಷ್ಟತೆ ಪಡೆಯುತ್ತಿದ್ದಾನೆ.
             ಏನೇ ಆದರೂ, ನೈತಿಕತೆ ಇಲ್ಲದ ಜೀವನ, ಮಾನವತೆ ಕಾಪಾಡದ ಮಾನವ, ಆದರ್ಶವಿರದ ಭಾವನೆ, ಮಾನವನ ಬದುಕು ಈ ಜಗದ ಹೀನ ಪ್ರಾಣಿಗೆ ಸಮವೆಂದು  ಹೇಳಬೇಕು, ಅನಾಗರೀಕ ಮಾನವ ಕಾಲದಿಂದ ಮಾನವನ ಶ್ರೇಷ್ಟ ನಾಗರೀಕ ಕಾಲದವೆರೆವಿಗೂ ಶಕ್ತರು ಅಶಕ್ತರ ರಕ್ತ ಹೀರುತ್ತಲೇ ಇದ್ದಾರೆ ಅದೂ ಹೆಣ್ಣು ಗಂಡುಗಳೆಂಬ  ಭೇದವಿರದೆ. ಅದರಲ್ಲೂ ಈ ಜಗದಲ್ಲಿ ಹೆಣ್ಣಿಗೆ ಆಗುತ್ತಿರುವಷ್ಟು ಕ್ರೂರ ಅನ್ಯಾಯದೆದುರು ಮಾನವತೆ ಕುರುಡಾಗಿದೆ......!?

ಇದಕ್ಕೆಲ್ಲಾ ಯಾರು ಕಾರಣ ...... !!!??? 





                       ಈ ಸಮಾಜವೇ ಅಥವಾ ಈ ಸಮಾಜದಲ್ಲಿರುವ ನಾವೇ .. !?

 ಎಂದು ನಮ್ಮ ಮನಸ್ಸಿನ ಮೇಲ್ಪದರಗಳನ್ನು ಸರಸಿ ಆಳದಲ್ಲಿರುವ ಸದಾ ಸತ್ಯದ ಬೆಂಕಿಯಲ್ಲಿ ಉರಿಯುವ 'ಆತ್ಮ ಜ್ಯೋತಿ'ಯನ್ನು  ಕೇಳಿ !  ಆಗ ಹೊರಬರುವುದು ಅಪ್ಪಟ್ಟ ಬಂಗಾರದಂಥ ಕಿಡಿ ಸತ್ಯಗಳು, ಅವುಗಳೇ ನಮ್ಮ 'ಮನದಂಗಳದ ಹನಿಮುತ್ತುಗಳು' ಈ ಬ್ಲಾಗಿನಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ, ಪ್ರಾಮಾಣಿಕ ಮನಸ್ಸಿಂದ ಚರ್ಚೆ(ಸಮಸ್ಯೆಗೆ ಪರಿಹಾರ ) ನಡೆಸುವುದೇ ನನ್ನ ಆಶಯವಾಗಿದೆ ಇದಕ್ಕೆ ನಿಮ್ಮೆಲ್ಲರ ಸಹಾಯ ಕೋರುವೆ ........ 
                                                                                                                           -ಜೆ.ವಿ.ಎಮ್  (ಶೂಜ್ಞ್ಯ )


2 comments:

  1. ತೀರಾ ವಿಭಿನ್ನ ವಿಚಾರಗಳ ಅನಾವರಣ ನಿಮ್ಮ ಬ್ಲಾಗ್ ಹೂರಣ. ನೈತಿಕತೆಯೂ ಬರೀ ಗ್ರಾಂಥಿಕ ಈಗ ಗೆಳೆಯ ಅನಾಚಾರವೇ ಲೌಕಿಕ. ನಿಮ್ಮ ಬರಹ ಮತ್ತು ಕೊಟ್ಟ ಚಿತ್ರಗಳೂ ಮಾನವೀಯತೆಯ ಪಾಠ...

    http://badari-poems.blogspot.in

    ReplyDelete
  2. ವಿಚಾರ, ವಿಮರ್ಶೆ, ವಿನಿಮಯ, ಎಲ್ಲಕ್ಕು ನಿಮ್ಮೆಲ್ಲರ ಸಹಾಯ ಹಸ್ತ ಬೇಕು ಸರ್......! ನನ್ನ ಬ್ಲಾಗಿಗೆ ಬೇಟಿ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು ...

    ReplyDelete